ಬೆಳಗಾವಿ/ರಾಯಚೂರು: ಪುನೀತ್ ರಾಜ್ ಕುಮಾರ್ (Power Star Puneeth Rajkumar) ನಿಧನ ಅಭಿಮಾನಿಗಳಿಗೆ ಬರ ಸಿಡಿಲು ಬಡಿದಂತಾಗಿದೆ. ರಾಜ್ಯದಲ್ಲಿ ಪುನೀತ್ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ವರದಿ ಆಗುತ್ತಿವೆ. ಶುಕ್ರವಾರವೇ ಪುನೀತ್ ನಿಧನದ (Puneeth Death) ಸುದ್ದಿ ಕೇಳಿ ಅಭಿಮಾನಿ ಮುನಿಯಪ್ಪ ಎಂಬವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಶುಕ್ರವಾರ ರಾತ್ರಿ ಪುನೀತ್ ಅವರ ಫೋಟೋಗೆ ಸಲ್ಲಿಸಿದ ಅಥಣಿ (Athani) ಅಭಿಮಾನಿ ಮನೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಉಡುಪಿ(Udupi)ಯಲ್ಲಿ ಅಭಿಮಾನಿ ಕೈ ಜಜ್ಜಿಕೊಂಡ್ರೆ, ರಾಯಚೂರಿ(Raichur)ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಿಧನ ಸುದ್ದಿಯಿಂದ ಆಘಾತಕ್ಕೆ ಒಳಗಾಗಿದ್ದ ಅಭಿಮಾನಿ
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ರಾಹುಲ್ ಗಾಡಿವಡ್ಡರ್ ಆತ್ಮಹತ್ಯೆಗೆ ಶರಣಾದ ಪುನೀತ್ ಅಭಿಮಾನಿ. ಪುನೀತ್ ರಾಜ್‍ಕುಮಾರ್ ಸಾವಿನ ಸುದ್ದಿ ಕೇಳಿ ರಾಹುಲ್ ಗಾಡಿ ವಡ್ಡರ್ ತೀವ್ರ ಆಘಾತಕ್ಕೆ ಒಳಗಾಗಿದ್ದರು. ನಿನ್ನೆ ಸಂಜೆ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕರ್ನಾಟಕದ ರತ್ನ ಎಂದು ಹೂವಿನಿಂದ ಅಲಂಕರಿಸಿದ್ದರು.ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪುನೀತ್ ಅಭಿಮಾನಿ ರಿಕ್ಷಾ ಚಾಲಕ ಕೈ ಜಜ್ಜಿಕೊಂಡಿದ್ದಾರೆ. 35 ವರ್ಷದ ಸತೀಶ್ ಕೈ ಜಜ್ಜಿಕೊಂಡ ಅಭಿಮಾನಿ. ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ರಿಕ್ಷಾ ಕೆಳಗೆ ಕೈ ಇರಿಸಿ ಜಜ್ಜಿಕೊಂಡಿದ್ದಾರೆ. ಸದ್ಯ ಸತೀಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೈ ಜಜ್ಜಿಕೊಂಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.