ಸ್ಯಾಂಡಲ್ವುಡ್ ಯುವರತ್ನ ಪುನೀತ್ ರಾಜ್ಕುಮಾರ್ (Puneeth Rajkumar Death) ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹೌದು, ರಾಜ್ಕುಮಾರ್ ಅವರಂತೆಯೇ ಪುನೀತ್ ರಾಜ್ಕುಮಾರ್ ಅವರ ಕಣ್ಣುಗಳನ್ನು (Eye Donation) ದಾನ ಮಾಡಲಾಗಿದೆ. (ಚಿತ್ರಗಳು ಕೃಪೆ: ರಾಘವೇಂದ್ರ ರಾಜ್ಕುಮಾರ್ ಇನ್ಸ್ಟಾಗ್ರಾಂ ಖಾತೆ)
ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ಅವರ ಕಿರಿಯ ಮಗ ಪುನೀತ್ ರಾಜ್ಕುಮಾರ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಟನ ಅಗಲಿಕೆಗೆ ಅಭಿಮಾನಿಗಳು, ಸಿನಿರಂಗದವರು, ಕ್ರಿಕೆಟಿಗರು ಹಾಗೂ ಬೇರೆ ಸಿನಿಮಾದ ಕಲಾವಿರೂ ಕಂಬನಿ ಮಿಡಿಯುತ್ತಿದ್ದಾರೆ.
ನಗು ಮುಖದ ರಾಜಕುಮಾರನ ಅಗಲಿಕೆ ಅಭಿಮಾನಿಗಳಿಗೆ ಬರ ಸಿಡಿಲಿನಂತೆ ಬಡಿದಿದೆ. ಇನ್ನು ನಟನ ಕಣ್ಣುಗಳನ್ನು ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದು, ಈಗಾಗಲೇ ವೈದ್ಯರ ತಂಡ ಕಣ್ಣನ್ನು ತೆಗೆದುಕೊಂಡಿದ್ದಾರಂತೆ. ಆದರೆ, ಇದರಿಂದ ಯಾರಿಗೆ ಹಾಗೂ ಎಷ್ಟು ಮಂದಿಗೆ ದೃಷ್ಟಿ ಭಾಗ್ಯ ಸಿಕ್ಕಿದೆ ಅನ್ನೋದು ಮಾಹಿತಿ ಲಭ್ಯವಾಗಿಲ್ಲ.
ಪುನೀತ್ ರಾಜ್ಕುಮಾರ್ ಅವರ ಕೆಲವು ಹಳೇ ಫೋಟೋಗಳನ್ನು ಅವರ ಅಣ್ಣ ರಾಘವೇಂದ್ರ ರಾಜ್ಕುಮಾರ್ ಅವರ ಇನ್ಸ್ಟಾಗ್ರಾಂ ಖಾತೆಯಿಂಧ ತೆಗೆದು ನಿಮಗಾಗಿ ಇಲ್ಲಿ ಹಂಚಿಕೊಳ್ಳಲಾಗಿದೆ.