ಜಾಗತಿಕ ಸಾಮಾಜಿಕ ಜಾಲತಾಣ ವಾಟ್ಸಾಪ್‍ನಲ್ಲಿ ಗುಡ್ ಮಾರ್ನಿಂಗ್, ಹಾಯ್ ಸಂದೇಶ ಕಳುಹಿಸುವುದು ಸರ್ವೇ ಸಾಮಾನ್ಯ. ಅದರಲ್ಲಿ ಅಪರಚಿತರಿಂದ ವಾಟ್ಸಾಪ್, ಅಥವಾ ಮಾಮೂಲಿ ಸಂದೇಶ ಬಂದರೆ ಈ ಸಂದೇಶವನ್ನು ನಿರ್ಲಕ್ಷಿಸುವುದು ಒಳ್ಳೆಯದು. ಏಕೆಂದರೆ ವ್ಯಕ್ತಿಯೊಬ್ಬರು ಹಾಯ್, ಗುಡ್ ಮಾರ್ನಿಂಗ್ ಸಂದೇಶದಿಂದಲೇ ಲಕ್ಷಾಂತರ ಹಣ ಕಳೆದುಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಹೌದು ಅಪರಿಚಿತರಿಂದ “ಶುಭೋದಯ ಸಂದೇಶ ಬರುತ್ತಿದ್ದರೆ ಹುಷಾರಾಗಿರಿ..ಯಾಕೆಂದರೆ ಕೇವಲ ಹಾಯ್ ಗುಡ್ ಮಾರ್ನಿಂಗ್ ಎಂಬ ಸಂದೇಶದಿಂದಲೇ 50 ವರ್ಷದ ವ್ಯಕ್ತಿಯೊಬ್ಬರು 5.91 ಲಕ್ಷ ರೂ. ಕಳೆದುಕೊಂಡಿದ್ದಾರೆ.
50 ವರ್ಷದ ವ್ಯಕ್ತಿಗೆ ಎರಡು ವರ್ಷಗಳ ಹಿಂದೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿತ್ತು. ಅಂದಿನಿಂದ, ಅವರ ಫೋನ್‍ಗೆ ನಿಯಮಿತವಾಗಿ ಶುಭೋದಯ ಮತ್ತು ಶುಭ ರಾತ್ರಿ ಸಂದೇಶಗಳು ಬರುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಅವರಿಗೆ ಸುಮಾರು 20 ಸಂದೇಶಗಳು ಬಂದಿವೆ. ಆದರೆ, ಅಕ್ಟೋಬರ್ 8 ರಂದು ಸಂಜೆ 6.30ಕ್ಕೆ ಸಂತ್ರಸ್ತೆಗೆ ಕರೆ ಬಂದಿದ್ದು, ಬಹಳ ಸಮಯದ ನಂತರ ಬೆಂಗಳೂರಿಗೆ ಬಂದಿದ್ದೇನೆ ಎಂದು ಕರೆ ಮಾಡಿದವರು ವಾಟ್ಸ್ಆ್ಯಪ್ ಲೊಕೇಶನ್ ಕೂಡ ಕಳುಹಿಸಿ ಅಲ್ಲಿಗೆ ಬರುವಂತೆ ಸೂಚಿಸಿದ್ದಾರೆ. ಅವರನ್ನು ನಂಬಿದ 50ರ ಹರೆಯದ ವ್ಯಕ್ತಿಯು ಅವರನ್ನು ಭೇಟಿ ಮಾಡಲು ಬಯಸಿ ವೀರಣ್ಣಪಾಳ್ಯ ಬಳಿಯ ಹೋಟೆಲ್‍ಗೆ ರಾತ್ರಿ 10.30ರ ಸುಮಾರಿಗೆ ತಲುಪಿದ್ದಾರೆ ಎಂದು ಗೋವಿಂದಪುರ ಪೊಲೀಸ್ ಠಾಣೆಯ ಪೊಲೀಸರು ದೂರಿನಲ್ಲಿ ದಾಖಲಾದ ಅಂಶವನ್ನು ವಿವರಿಸಿದ್ದಾರೆ.