
ಕರ್ನಾಟಕದಲ್ಲಿ ಚಿತ್ರೀಕರಣ ಅನುಭವ ಹಂಚಿಕೊಂಡ ಟಾಲಿವುಡ್ ನಟ: ಹೌದು, ಭಾನುವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆದರು. ಈ ಬಗ್ಗೆ ಎಕ್ಸ್ ಪೋಸ್ಟ್ ಶೇರ್ ಮಾಡಿದ ಗೇಮ್ ಚೇಂಜರ್ ತಾರೆ, ಧನ್ಯವಾದಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಗಾರು. ”ಕರ್ನಾಟಕದಲ್ಲಿ ಚಿತ್ರೀಕರಣ ಮಾಡುವುದು ನನಗೆ ಯಾವಾಗಲೂ ಸಂತೋಷದ ಸಂಗತಿ ಮತ್ತು ನಿಮ್ಮ ಆತ್ಮೀಯ ಆತಿಥ್ಯಕ್ಕೆ ನಾನು ನಿಜವಾಗಿಯೂ ಕೃತಜ್ಞ. ನಿಮ್ಮನ್ನು ಭೇಟಿಯಾಗಿದ್ದು ಗೌರವದ ಕ್ಷಣ” ಎಂದು ಬರೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು? ಭೇಟಿಯ ಫೋಟೋಗಳನ್ನು ಹಂಚಿಕೊಂಡ ಸಿಎಂ, ”ಪೆದ್ದಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ಅವರು ಇಂದು ಮೈಸೂರಿನಲ್ಲಿ ನನ್ನನ್ನು ಭೇಟಿಯಾಗಿ ಕೆಲ ಹೊತ್ತು ಮಾತುಕತೆ ನಡೆಸಿದರು” ಎಂದು ಬರೆದುಕೊಂಡಿದ್ದಾರೆ. ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಈ ಭೇಟಿ ನಡೆದಿದೆ.ದಕ್ಷಿಣದ ಖ್ಯಾತ ನಟ ಅಲ್ಲು ಅರ್ಜುನ್, ಜನಪ್ರಿಯ ನಿರ್ಮಾಪಕ ಅಲ್ಲು ಅರವಿಂದ್ ಅವರ ತಾಯಿ, ದಿವಂಗತ ನಟ ಅಲ್ಲು ರಾಮಲಿಂಗಯ್ಯ ಅವರ ಪತ್ನಿ ಅಲ್ಲು ಕನಕರತ್ನಮ್ಮ ಶನಿವಾರ ಮುಂಜಾನೆ ತಮ್ಮ 94ರ ಹರೆಯದಲ್ಲಿ ಕೊನೆಯುಸಿರೆಳೆದರು. ಮುಂಬೈನಲ್ಲಿದ್ದ ಅಲ್ಲು ಅರ್ಜುನ್, ಮೈಸೂರಿನಲ್ಲಿದ್ದ ರಾಮ್ ಚರಣ್ ಕೆಲವೇ ಹೊತ್ತಿನಲ್ಲಿ ಹೈದರಾಬಾದ್ನ ನಿವಾಸಕ್ಕೆ ತಲುಪಿ ಅಲ್ಲು ಕನಕರತ್ನಮ್ಮ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿ ಆದರು. ಶನಿವಾರ ರಾತ್ರಿಯೇ ನಟ ರಾಮ್ ಚರಣ್ ಮೈಸೂರಿಗೆ ಪ್ರಯಾಣ ಬೆಳೆಸಿದರು. ಸದ್ಯ ಸಾಂಗ್ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ.ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಕೂಡಾ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಉಳಿದಂತೆ, ಜಾಹ್ನವಿ ಕಪೂರ್, ಶಿವರಾಜ್ಕುಮಾರ್, ಜಗಪತಿ ಬಾಬು ಮತ್ತು ದಿವ್ಯೆಂದು ತಾರಾಬಳಗದಲ್ಲಿದ್ದಾರೆ. ಉಪ್ಪೇನ ಸಿನಿಮಾ ಖ್ಯಾತಿಯ ಬುಚ್ಚಿ ಬಾಬು ಸನಾ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರವನ್ನು ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಪ್ರೆಸೆಂಟ್ ಮಾಡುತ್ತಿದೆ.


