ಹುಬ್ಬಳ್ಳಿ(ಅ.16): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಹಾಗೂ ನಾನು ಭೇಟಿಯಾಗಿದ್ದು ಅಪ್ಪಟ ಸುಳ್ಳು. ಒಂದು ವೇಳೆ ನಾವಿಬ್ಬರೂ ಭೇಟಿಯಾಗಿದ್ದೆವು(Meet) ಎಂಬುದನ್ನು ಯಾರಾದ್ರೂ ಸಾಬೀತು ಮಾಡಿದರೆ ನಾನು ರಾಜಕೀಯದಿಂದ(Politics) ನಿವೃತ್ತಿ(Retire) ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Opposition Leader Siddaramaiah) ಸವಾಲು ಹಾಕಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಎಸ್ವೈ ಭೇಟಿಯಾಗಿದ್ದನ್ನು ಪ್ರೂವ್ ಮಾಡಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಘೋಷಿಸಿದರು. ಮುಂದುವರೆದ ಅವರು, ಬಿಎಸ್ವೈ ಆರ್ಎಸ್ಎಸ್ನಿಂದ ಬಂದವರು. ನಾವು-ಅವರು ತದ್ವಿರುದ್ದ. ಅವರನ್ನ ಭೇಟಿಯಾಗಿದ್ದು ಸುಳ್ಳು. ಅಧಿಕಾರದಲ್ಲಿರೋರ ಮನೆ ಬಾಗಿಲಿಗೆ ನಾನು ಯಾವತ್ತು ಹೋಗಿಲ್ಲ. ಅದು ನನ್ನ ಪ್ರಿನ್ಸಿಪಲ್, ಹೀಗಾಗಿ ನಾನು ಬಿಎಸ್ ವೈ ಭೇಟಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಲೀಂ-ಉಗ್ರಪ್ಪ ಸಂಭಾಷಣೆ ಹಿಂದೆ ಸಿದ್ದರಾಮಯ್ಯ ಕೈವಾಡ ಇದೆ ಎಂಬ ಜಗದೀಶ್ ಶೆಟ್ಟರ್ ಆರೋಪಕ್ಕೆ ವಿಪಕ್ಷ ನಾಯಕ ತಿರುಗೇಟು ಕೊಟ್ಟರು. ಹಾಗಿದ್ರೆ ಯತ್ನಾಳ್, ವಿಶ್ವಾನಾಥ್ ಅವರಿಗೂ ನಾನೇ ಹೇಳಿದ್ನಾ..? ಹಿಂದೆ ಅನಂತಕುಮಾರ-ಬಿಎಸ್ ವೈ ಮಾತನಾಡಿದ್ದರು ಅದಕ್ಕೂ ನಾನೇ ಕಾರಣನಾ..? ಇವರೆಲ್ಲಾ ಸಿಎಂ ಆಗಿದ್ದವರು ಹೀಗೆ ಮಾತನಾಡಿದ್ರೆ ಹೇಗೆ? ಎಲ್ಲದಕ್ಕೂ ಸಿದ್ದರಾಮಯ್ಯನನ್ನೇ ಟಾರ್ಗೆಟ್ ಮಾಡಿದ್ರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.