`ಅಖಂಡ’ ಸಿನಿಮಾ ನೋಡುತ್ತಲೇ ಚಿತ್ರಮಂದಿರದಲ್ಲಿ ಪ್ರಾಣ ಬಿಟ್ಟ ಬಾಲಯ್ಯ ಫ್ಯಾನ್..!
ಟಾಲಿವುಡ್ ಸೂಪರ್ ಸ್ಟಾರ್ ಬಾಲಯ್ಯ(Balayya) ಸಿನಿಮಾಗಳು ಬಿಡುಗಡೆ ಅದರೆ ಅವರ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಅದರಲ್ಲೂ ಡಿಸೆಂಬರ್ 2ರಂದು ಬಿಡುಗಡೆಯಾಗಿರುವ ‘ಅಖಂಡ’(Akhanda) ಸಿನಿಮಾ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ನಂದಮೂರಿ ಬಾಲಕೃಷ್ಣ(Nandamuri Balakrishna)ಸಿನಿಮಾ ‘ಅಖಂಡ’ ಸದ್ದು ಮಾಡುತ್ತಿದೆ. ಬಿಡುಗಡೆಯಾದ ದಿನದಿಂದಲೂ ಸಿನಿಮಾ ಬಗ್ಗೆ ಉತ್ತಮ ಪ್ರಕ್ರಿಯೆ ಕೇಳಿಬರುತ್ತಿದೆ. ಬಾಲಣ್ಣನ ಮಾಸ್(Mass) ಎಂಟರ್‌ಟೈನರ್‌ಗೆ ಮಾಸ್ ಪ್ರೇಕ್ಷಕರು ಮಸ್ತ್ ರೆಸ್ಪಾನ್ಸ್ ಕೊಟ್ಟಿದ್ದಾರೆ. ‘ಅಖಂಡ’ ಚಿತ್ರದ ಕಥೆ, ನಟನೆ ಎಲ್ಲವೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಹಿಂದೆ ನಟಿಸಿರದ ಪಾತ್ರದಲ್ಲಿ, ಹೊಸ ಲುಕ್ನಲ್ಲಿ ಬಾಲಯ್ಯನ ಆರ್ಭಟ ಅಬ್ಬಬ್ಬಾ…ಮಸ್ತ್ ಇದೆ. ಸಿನಿಮಾ ನೋಡಿದ ಫ್ಯಾನ್ಸ್(Fans) ಮತ್ತೆ ಮತ್ತೆ ಸಿನಿಮಾ ನೋಡುತ್ತಿದ್ದಾರೆ. ಆದರೆ ಈ ನಡುವೆ ದುರಂತವೊಂದು ನಡೆದುಹೋಗಿದೆ. ಅಖಂಡ ಸಿನಿಮಾ ನೋಡುತ್ತಲೇ ಚಿತ್ರಮಂದಿರದಲ್ಲೇ ಬಾಲಯ್ಯ ಅವರ ಅಭಿಮಾನಿ ಪ್ರಾಣ ಬಿಟ್ಟಿದ್ದಾರೆ. ಈ ವಿಷಯ ಕೇಳಿ ಬಾಲಯ್ಯ ಅಭಿಮಾನಿಗಳಿಗೆ ಬೇಸರ ತಂದಿದೆ. ಹಾಗಾಗಿ ಸೂತಕದ ಛಾಯೆ ಎದುರಾಗಿದೆ. ಚಿತ್ರದ ಯಶಸ್ಸಿನ ನಡುವೆ ಇಂಥ ದುರ್ಘಟನೆ ನಡೆದಿರುವುದು ಬೇಸರದ ಸಂಗತಿ.
ಸಿನಿಮಾ ನೋಡುವಾಗಲೇ ಬ್ರೇನ್ ಸ್ಟ್ರೋಕ್!
ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿ ರಾಮಕೃಷ್ಣ ಅವರು ಇತ್ತೀಚೆಗೆ ‘ಅಖಂಡ’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತೆರಳಿದ್ದರು. ಸಿನಿಮಾ ಎಂಜಾಯ್ ಮಾಡುತ್ತಿರುವಾಗಲೇ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿದೆ. ಪರಿಣಾಮವಾಗಿ ಅವರು ಅಲ್ಲೇ ಕುಸಿದು ಬಿದ್ದರು. ಶೀಘ್ರವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆ ತಲುಪುವ ಮುನ್ನವೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ರಾಮಕೃಷ್ಣ ಕೇವಲ ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿಯಷ್ಟೇ ಆಗಿರಲಿಲ್ಲ. ಸಿನಿಮಾ ಪ್ರದರ್ಶನಕನಾಗಿಯೂ ಗುರುತಿಸಿಕೊಂಡಿದ್ದರು. ಚಿತ್ರಮಂದಿರಗಳ ಮಾಲೀಕರಾಗಿದ್ದ ಅವರು ಪೂರ್ವ ಗೋದಾವರಿ ಜಿಲ್ಲೆಯ ಸಿನಿಮಾ ಪ್ರದರ್ಶಕರ ಒಕ್ಕೂಟದ ಅಧ್ಯಕ್ಷ ಕೂಡ ಆಗಿದ್ದರು. ಅವರ ನಿಧನಕ್ಕೆ ಎಲ್ಲರೂ ಸಂತಾಪ ಸೂಚಿಸಿದ್ದಾರೆ.
ಚಿತ್ರಮಂದಿರದಲ್ಲಿ ಕಾಣಿಸಿಕೊಂಡ ಬೆಂಕಿ
ಮತ್ತೊಂದೆಡೆ ‘ಅಖಂಡ’ ಸಿನಿಮಾ ಪ್ರದರ್ಶನ ಆಗುತ್ತಿದ್ದ ವೇಳೆ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶ್ರೀಕಾಕುಳಮ್ನಲ್ಲಿರುವ ರವಿಶಂಕರ್ ಚಿತ್ರಮಂದಿರದ ಪರದೆ ಹಿಂಬಾಗದಲ್ಲಿ ಇರುವ ಸ್ಪೀಕರ್ಗೆ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಅಲ್ಲಿದ್ದ ಜನ ಎಚ್ಚೆತ್ತುಕೊಂಡಿದ್ದಾರೆ. ಈ ವಿಷಯವನ್ನು ಚಿತ್ರಮಂದಿರದ ಸಿಬ್ಬಂದಿಗೆ ತಿಳಿಸಿದ್ದಾರೆ. ಕೂಡಲೇ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಹೀಗೆ ಅಖಂಡ ಸಿನಿಮಾ ಪ್ರದರ್ಶನ ವೇಳೆ ಕೆಲ ಅವಘಡಗಳು ನಡೆದಿವೆ. ಈ ವಿಚಾರ ಬಾಲಯ್ಯ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
50 ಕೋಟಿ ಕ್ಲಬ್ನತ್ತ ಬಾಲಯ್ಯ ‘ಅಖಂಡ’ ಸಿನಿಮಾ
ಬಾಲಯ್ಯ ‘ಅಖಂಡ’ ಸಿನಿಮಾ ಮೊದಲ ದಿನವೇ ತೆಲುಗು ಬಾಕ್ಸಾಫೀಸ್ ಅನ್ನು ಉಡೀಸ್ ಮಾಡಿದೆ. ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಮುಗಿಬಿದ್ದು ‘ಅಖಂಡ’ ಸಿನಿಮಾ ನೋಡುತ್ತಿದ್ದಾರೆ. ಬಾಕ್ಸಾಫೀಸ್ ಲೆಕ್ಕಾಚಾರದ ಪ್ರಕಾರ, ‘ಅಖಂಡ’ ಮೊದಲ ದಿನದ ಗಳಿಕೆ ಸುಮಾರು 29 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಬಾಲಣ್ಣನ ವೃತ್ತಿ ಬದುಕಿನಲ್ಲೇ ಮೊದಲ ದಿನ ಅತೀ ಹೆಚ್ಚು ಗಳಿಸಿದ ಸಿನಿಮಾವೆಂದು ಅಂದಾಜಿಸಲಾಗಿದೆ. ಇನ್ನೂ ಶುಕ್ರವಾರ, ಶನಿವಾರ, ಭಾನುವಾರ ಕೂಡ ಭರ್ಜರಿ ಕೆಲಕ್ಷನ್ ಮಾಡಿದೆ. 50 ಕೋಟಿ ಕ್ಲಬ್ ಸನಿಹದತ್ತ ಬಂದು ನಿಂತಿದೆ ಎಂದು ವರದಿಗಳು ಹೇಳಿವೆ.