ಸುದ್ದಿ
ಅಕ್ರಮ ಹಣ ವರ್ಗಾವಣೆ ಪ್ರಕರಣ: ಶಿವಸೇನೆ ಸಂಸದೆ ಭಾವನಾಗೆ ಇ.ಡಿ ನೋಟಿಸ್
ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಅಕ್ಟೋಬರ್ 4ರಂದು ವಿಚಾರಣೆಗೆ ಹಾಜರಾಗುವಂತೆ ಶಿವಸೇನೆ ಸಂಸದೆ ಭಾವನಾ ಗವಳಿ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ)ನೋಟಿಸ್ ಜಾರಿಮಾಡಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಅಕ್ಟೋಬರ್ 4ರಂದು ದಕ್ಷಿಣ ಮುಂಬೈನ ಇ.ಡಿ ಕಚೇರಿಯಲ್ಲಿ ಪ್ರಕರಣದ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಇ.ಡಿ ಮಂಗಳವಾರ ಭಾವನಾ ಗವಳಿ ಅವರ ಆಪ್ತ ಸಯೀದ್ ಖಾನ್ ಅವರನ್ನು ಬಂಧಿಸಿದೆ.