ಸುದ್ದಿ
ಅಂಧರ ಬಾಳಿಗೆ ಬೆಳಕಾಗುತ್ತಿರುವ ಡಾ.ಶ್ರೀನಿವಾಸ್ ಜೋಶಿ..!
ಇವರು ಹುಬ್ಬಳ್ಳಿಯ ಪ್ರತಿಷ್ಟಿತ ವೈದ್ಯರಾದ ಎಂಎಂ ಜೋಶಿಯವರ ಪುತ್ರ ಡಾ.ಶ್ರೀನಿವಾಸ್ ಜೋಶಿ.. ಅಂಧತ್ವ ಮುಕ್ತ ಉತ್ತರ ಕರ್ನಾಟಕದ ನಿರ್ಮಾಣವೇ ಇವರ ಗುರಿ.. ತಂದೆ ಆರಂಬಿಸಿದ್ದ ಆ ಮಹತ್ಕಾರ್ಯವನ್ನ ಪುತ್ರ ಶ್ರೀನಿವಾಸ್ ಜೋಶಿಯವರು ಮುಂದುವರೆಸಿಕೊಂಡು ಹೋಗ್ತಿದ್ದಾರೆ.. ತಮ್ಮದೇ ಎಂಎಂ ಜೋಶಿ ಆಸ್ಪತ್ರೆಯ ಮೂಲಕ ಪ್ರತಿ ವರ್ಷ ಎರಡೂವರೆ ಲಕ್ಷ ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವುದರ ಮೂಲಕ ಅಂಧರ ಬಾಳಿನಲ್ಲಿ ಬೆಳಕು ಮೂಡಿಸಿತ್ತಿದ್ದಾರೆ.. ಈಗಾಗ್ಲೇ ತಂದೆಯ ಕನಸಂತೆ ಶ್ರೀನಿವಾಸ್ ಜೋಶಿಯವರು ಉತ್ತರ ಕರ್ನಾಟಕದ 3 ಗ್ರಾಮಗಳನ್ನ ಅಂಧತ್ವದಿಂದ ಮುಕ್ತ ಮಾಡಿದ್ದಾರೆ.. ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ 12 ದೃಷ್ಟಿ ಕೇಂದ್ರಗಳ ನಿರ್ಮಾಣ ಹಾಗೂ 4 ಉಪ ಆಸ್ಪತ್ರೆಗಳ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.. ಆಗಾಗ್ಗೆ ಉಚಿತ ನೇತ್ರದಾನ ಶಿಬಿರಗಳು, ಬಡವರಿಗೆ, ರೈತರಿಗೆ ಉಚಿತ ಚಿಕಿತ್ಸೆ ನೀಡುತ್ತಾ, ಉತ್ತರ ಕರ್ನಾಟಕದ ಜನರ ಜೀವ ಸಂಜೀವಿನಿಯಾಗಿದ್ದಾರೆ ಡಾ.ಶ್ರೀನಿವಾಸ್ ಜೋಶಿ..