ಇತ್ತೀಚಿನ ಸುದ್ದಿ

ಸುಖಾ ಸುಮ್ಮನೆ ಓಡಾಡಿದ್ರೆ ಪೊಲೀಸರ ಕೈಗೆ ತಗ್ಲಾಕೊಳ್ಳೋದು ಗ್ಯಾರೆಂಟಿ.!

ಬಾರ್, ಪಬ್ , ರೆಸ್ಟೋರೆಂಟ್ ಗಳ ಮೇಲೆ ತೀವ್ರ ನಿಗಾ ಇರಿಸಬೇಕು. ಯಾವುದೇ ಕಾರಣಕ್ಕೂ ರಾತ್ರಿ 10 ಗಂಟೆ ಬಳಿಕ ಪಬ್ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಇರದಂತೆ ನೋಡಬೇಕು. 9 ಗಂಟೆಯಿಂದಲೇ ಮೈಕ್ ಮೂಲಕ ಅನೌನ್ಸ್ ಮಾಡುತ್ತಿರಬೇಕು. ಜೊತೆಗೆ ಹೊಯ್ಸಳಗಳು ಸದಾ ಗಸ್ತಿನಲ್ಲಿ ಇರುವಂತೆ ಪೊಲೀಸ್ ಕಮೀಷನರ್ ಈಗಾಗಲೇ ಸೂಚನೆ ನೀಡಿದ್ದಾರೆ.

ನೈಟ್ಕರ್ಪ್ಯೂವೇಳೆಯಲ್ಲಿಎನಿರುತ್ತೆಎನಿರಲ್ಲ.?

ನೈಟ್ ಕರ್ಪ್ಯೂ ವೇಳೆಯಲ್ಲಿ ರೋಗಿಗಳು ಮತ್ತು ಅವರ ಸಹಾಯಕರು ಓಡಾಡಬಹುದು. ತುರ್ತು ಸೇವೆಗಳು ಓಪನ್ ಇರಲಿದೆ.

ಕಂಪನಿ ನೌಕರರು,‌ ಕಾರ್ಖಾನೆಯ ಕಾರ್ಮಿಕರು ಐಡಿ ಕಾರ್ಡ್ ತೋರಿಸಿ ಓಡಾಡಬಹುದು.

ಗೂಡ್ಸ್ ಸೇವೆ ಇರಲಿದೆಬಸ್ , ರೈಲು, ವಿಮಾನ ಸೇವೆ ಇರಲಿದೆ

ಬಸ್ ಟಿಕೆಟ್ ತೋರಿಸಿ ಓಡಾಟ ನಡೆಸಬಹುದು

ಎಲ್ಲಾ ವಾಣಿಜ್ಯ ಚಟುವಟಿಕೆಗೆ ನಿರ್ಬಂಧ

ಅಗತ್ಯ ಸೇವೆ ಒದಗಿಸುವ ವಾಹನಕ್ಕೆ ಅನುಮತಿ

ಫುಡ್​ ಹೋಂ ಡೆಲಿವರಿಗೆ ಅನುಮತಿ

ಇ-ಕಾಮರ್ಸ್, ಖಾಲಿ ವಾಹನ ಸಂಚಾರಕ್ಕೆ ಅವಕಾಶ

ದೂರ ಪ್ರಯಾಣದ ಬಸ್​ಗಳಿಗೆ ಅನುಮತಿ

ಆಟೋ, ಕ್ಯಾಬ್​ಗೆ ಅವಕಾಶ

ನೈಟ್​ಕರ್ಪ್ಯೂ ವೇಳೆ ಬಾರ್, ಪಬ್ ಬಂದ್

ಲೇಟ್​ನೈಟ್ ಪಾರ್ಟಿ, ಸಮಾರಂಭಗಳಿಗೆ ಬ್ರೇಕ್

ಎಲ್ಲಾ ಫುಡ್ ಸ್ಟ್ರೀಟ್​​ಗಳು ಬಂದ್

ಪಬ್,ಬಾರ್, ಕ್ಲಬ್​​, ಹೋಟೆಲ್​ಗಳ್ಲಿ ಡಿಸೆಂಬರ್ 28ರಿಂದ 10 ದಿನ ಶೇ.50ರಷ್ಟು ಮಾತ್ರ ಅವಕಾಶ

ಸಿನೆಮಾ ಥಿಯೇಟರ್ ಬಂದ್

ಮುಂಜಾಗ್ರತಾಕ್ರಮಗಳೇನು?

ಓಮೈಕ್ರಾನ್ ಕೇಸ್ ಹೆಚ್ಚು ಹರಡಿದರೆ ಏನು ಮಾಡಬೇಕು ಎಂಬ ಬಗ್ಗೆ ಮುನ್ನಚ್ಚರಿಕಾ ಕ್ರಮ್ಳ ಬಗ್ಗೆ ಚರ್ಚೆಯಾಗಿದೆ.  ಓಮೈಕ್ರಾನ್ ಹೇಗೆ ಹರಡುತ್ತಿದೆ? ಹೊರರಾಜ್ಯ, ಹೊರ ದೇಶದಲ್ಲಿ ಹೇಗೆ ಹರಡುತ್ತಿದೆ ಎಂಬ ಕುರಿತು ಚರ್ಚೆಯಾಗಿದೆ. 4000 ಐಸಿಯು ತಯಾರಿದೆ. 7051 ಬೆಡ್​​ಗಳನ್ನು ಐಸಿಯು ಬೆಡ್​​ಗಳಾಗಿ ಪರಿವರ್ತನೆ ಮಾಡಲಾಗಿದೆ. ಅಷ್ಟೇ ಅಲ್ಲದೇ, 3091 ಹಾಸಿಗೆಗಳು ಕೊರೋನಾಗೆ ಹೆಚ್ಚುವರಿಯಾಗಿ ಮೀಸಲು ಇಡಲಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.

ರಾಜ್ಯದಲ್ಲಿ ಹೊಸವರ್ಷಕ್ಕೆ ಹೊಸ ನಿಯಮ ಜಾರಿಯಾಗಲಿದೆ. ರಾಜ್ಯಾದ್ಯಂತ ಡಿ.28ರಿಂದ 10 ದಿನ ನೈಟ್ ಕರ್ಫ್ಯೂ ಇರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಹೊಸ ವರ್ಷಾಚರಣೆ ನಿಷೇಧ ಮಾಡಲಾಗಿದೆ. ಪಬ್, ಬಾರ್, ಕ್ಲಬ್​​, ಹೋಟೆಲ್​ಗಳ್ಲಿ ಡಿಸೆಂಬರ್ 28ರಿಂದ 10 ದಿನ ಶೇ.50ರಷ್ಟು ಮಾತ್ರ ಅವಕಾಶ ನೀಡಲಾಗಿದೆ. ಸಿನಿಮಾಗೆ 50% ಅನ್ವಯ ಆಗಲ್ಲ. ನೈಟ್ ಕರ್ಪ್ಯೂ ವೇಳೆ ಸಿನಿಮಾ ಬಂದ್ ಇರಲಿದೆ.  ಆಮೇಲೆ ಪರಿಸ್ಥಿತಿ ‌ನೋಡಿಕೊಂಡು ಸಿಎಂ  ತೀರ್ಮಾನ ಮಾಡ್ತಾರೆ ಎಂದು ಆರೋಗ್ಯ ಸುಧಾಕರ್ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button