ಕ್ರೈಂ

ತೆರಿಗೆ ಅಧಿಕಾರಿ ಸೋಗಿನಲ್ಲಿ ಲಾರಿ ಮಾಲೀಕರ ಬಳಿ ಹಣಕ್ಕೆ ಬೇಡಿಕೆ: ವ್ಯಕ್ತಿಯ ಬಂಧನ

ಬೆಂಗಳೂರು: ವಾಣಿಜ್ಯ ತೆರಿಗೆ ಅಧಿಕಾರಿ‌ ಎಂದು ಹೇಳಿಕೊಂಡು‌ ಲಾರಿ‌ ಮಾಲೀಕರ ಬಳಿ‌ ಹಣಕ್ಕೆ‌ ಬೇಡಿಕೆ ಇಡುತ್ತಿದ್ದ ಆರೋಪದಡಿ ಚೆನ್ನಪ್ಪ ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಚೆನ್ನಪ್ಪ, ಲಾರಿ ಮಾಲೀಕರನ್ನು ಬೆದರಿಸುತ್ತಿದ್ದರು. ಹಣಕ್ಕೆ ಬೇಡಿಕೆ ಇರಿಸುತ್ತಿದ್ದರು. ಈ ಬಗ್ಗೆ ಲಾರಿ‌ ಮಾಲೀಕರೊಬ್ಬರು ದೂರು‌ ನೀಡಿದ್ದರು’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ತನಿಖೆ‌ ಕೈಗೊಂಡು‌ ಆರೋಪಿಯನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ‌ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು‌ ಕೋರುತ್ತೇವೆ’ ಎಂದೂ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button